Tuesday, January 6, 2009

ನಾವೆಂಥ ಧನ್ಯರು......


ಭವ್ಯ ಪರಂಪರೆಗೆ, ಸಂಸ್ಕೃತಿಗೆ ಜಗತ್ಪ್ರಸಿದ್ಧಿಯಾದ

ಶೋಭಾಯಮಾನವಾದ ನಾಡಿನಲ್ಲಿ ಜನಿಸಿರುವ ನಾವೆಂಥ ಧನ್ಯರು.....



ರವಿ ಕಾಣದ್ದನ್ನ ಕಂಡ ಕವಿಗಳ ನಾಡು, ಅಭೂತಪೂರ್ವ ಕಲೆಗಳ ಬೀಡು

ಎಂದೆನಿಸಿರುವ ಭೂಮಿಯಲ್ಲಿರುವ ನಾವೆಂತ್ ಧನ್ಯರು...



ಸೋದರತೆ, ಸಮಾನತೆ,ವಿಶಾಲ ಮನೋಭಾವಗಳ ತವರಾದ

ಚಿನ್ನದ ನಾಡಿನಲ್ಲಿ ಬೆಳೆಯುತ್ತಿರುವ ನಾವೆಂಥ ಧನ್ಯರು..



ನಾಡಿನ ಜನರ ನಾಡಿ-ಮಿಡಿತಗಳಲ್ಲಿ ಉಸಿರಾಗಿರುವ ಕಾವೇರಿ

ತಾಯಿಯ ಮಡಿಲಲ್ಲಿ ಜೀವಿಸುತ್ತಿರುವ ನಾವೆಂಥ ಧನ್ಯರು...



ಸ್ವಾಭಿಮಾನ,ಧೈರ್ಯ,ಪುರುಷಸಿಂಹತ್ವಕ್ಕೆ ನೆಲೆಯಾದ

ವೀರಭೂಮಿಯಲ್ಲಿ ನೆಲೆಸಿರುವ ನಾವೆಂಥ ಧನ್ಯರು...



ಮುಂಬರುವ ಜನ್ಮಗಳಲ್ಲಿ ಪರಮಪುನೀತೆಯಾದ ಭುವನೇಶ್ವರಿ ತಾಯಿಯ

ಸೇವೆಗಯ್ಯುವ ಪುಣ್ಯ ದೊರೆತರೆ ಆಹ್ಹಾ.. ಆಗ ನಾವೆಂಥ ಧನ್ಯರು.... || ನಾವೆಂಥ ಧನ್ಯರು||



* Ramesha