Tuesday, May 1, 2012

ಆಗಬಹುದು

ಜಗತನ್ನೇ ಬೆಳಗುವ ಭಾಸ್ಕರ ನಾನಗದಿರಬಹುದು ಪ್ರಪಂಚವನ್ನೇ ಜಯಿಸಿ ಆಳಿದ ದೊರೆ ಅಲೆಗ್ಸ್ಯಾಂಡರ್ ನಾನಗದಿರಬಹುದು ಪಂಚಭೂತಗಳನ್ನ ನಿಯಂತ್ರಣದಲ್ಲಿಟ್ಟೂಕೊಂಡಿರುವ ತ್ರಿವಿಕ್ರಮ ನಾನಲ್ಲ ಆಗಬಹುದು ನಾನೊಬ್ಬ ಸ್ಥಿತ ಪ್ರಜ್ಞ ಕಾನನದೊಳಗಿನ ಮುಗಿಲನ್ನು ಮುಟ್ಟುವ ಕುಸುಮದ ಸುಗಂಧ ನಾನಲ್ಲ ಬಾನಿನ ಎಲ್ಲೆಯ ಮೀರಿ ಎತ್ತರಕ್ಕೆ ಹಾರುವ ಗರುಡನ ತೀಕ್ಷ್ಣತೆ ನನಗಿಲ್ಲ ಆಗಬಹುದು ನಾನೊಂದು ಬಾಳಿನ ಸಮುದ್ರವನ್ನ ಸಮರ್ಥವಾಗಿ ಈಜುವ ಮತ್ಸ್ಯ ಆಗಬಹುದು ನಾನೊಂದು ಇರುಳಿನಲ್ಲಿ ಬೆಳಗುವ ಮೇಣದಬತ್ತಿ ಮೋಡದ ಮರೆಯಲಿ ಮಿಂಚಿ ಗುಡುಗುವ ಸಿಡಿಲು ನಾನಲ್ಲ ಕಡಲಿನ ಅಲೆಗಳ, ಧೂಮ್ಮಿಕ್ಕುವ ತೆರೆಗಳ ಅಂಚಿನ ಶಕ್ತಿಯು ನನಗಿಲ್ಲ ಆಗಬಹುದು ನಾ ಸಹಜತೆಯ ಬಯಸುವ ಮಣ್ಣಿನ ಕಣ ನಾಳಿನ ಭವಿಷ್ಯದ ದೀವಿಗೆಯನ್ನ ಕಟ್ಟುವ ಪುಟ್ಟ ಮಣ್ಣಿನ ಕಣ