Friday, April 18, 2014

ಬಿಟ್ಟೆನೆಂದರು ಬಿಡಿಸದು ಕರುನಾಡ ಮಣ್ಣಿನ ಬಂಧ....

ಹಸಿವು, ಮಾನಸಿಕ ಹಿಂಸೆ ಯನ್ನ ಕ್ಷಣಾರ್ಧದಲ್ಲಿ ದೂರ ಮಾಡುವ, ಸ್ವರ್ಗಕ್ಕೆ ಕಿಚ್ಚಚ್ಚುವ ಸಾಮರ್ಥ್ಯವಿರುವ ರತ್ಹ್ನದಾಕ್ಷರಗಳ ಸಂಗವ ನಾ ಹೇಗೆ ತೊರೆಯಲಿ, ಮರೆಯಲಿ.. ಜೀವನದಲ್ಲಿ ದೇಹಕ್ಕಂತಿರುವ ಚರ್ಮದ ಹಾಗಿರುವ ಆತ್ಮವಿಶ್ವಾಸವನ್ನ ವೃದ್ಧಿಸುವ ಸೋದರ ಸಂಗಡವನ್ನ ನಾ ಹೇಗೆ ಮರೆಯಲಿ, ತೊರೆಯಲಿ.... ಸಾವಿರಾರು ಕಡುಪಾಪಗಳನ್ನು ಮಾಡಿದರು ಪುಣ್ಯಭೂಮಿಯನ್ನು ಸ್ಪರ್ಶಿಸಿದರೆ ಪುನೀತರಾಗಿ ಮೋಕ್ಷ ಪಡೆಯುವ ಈ ಹಿಂದುಸ್ಥಾನವನ್ನ ನಾ ಹೇಗೆ ತೊರೆಯಲಿ, ಮರೆಯಲಿ.... ಮಾನಸಿಕ ತೊಲನಾಟ್ಗಳನ್ನ ಹೋಗಲಾಡಿಸಿ ನೆಮ್ಮದಿಯಿಂದ ಸ್ವಾವಲಂಬಿಯಾಗಿ ಜೀವಿಸಲು ಸಹಕರಿಸುವ ಗೀತೋಪದೆಶಿಸಿದ ಸರ್ವೋತ್ತಮನನ್ನು ನಾ ಹೇಗೆ ಮರೆಯಲಿ, ತೊರೆಯಲಿ ಕ್ಷಣಿಕ ಮನಸಿನ ಅಸಮತೊಲನಕ್ಕೆ... ಭಾಸ್ಕರನು ಕಂಡು ಕೇಳಿರದ ಮೌಡ್ಯ-ಅಂಧಕಾರವನ್ನ ತಮ್ಮ ಕವಿತೆಗಳ ಮೂಲಕ ಕಿತ್ತೊಗೆದು ಸೊಗಸಾದ ಬದುಕಿನ ಸಾರವನ್ನ ಉಣಿಸಬಡಿಸುವ ಕವಿರತ್ನತ್ರಯರಿರುವ ಕರುನಾಡನ್ನ ನಾ ಹೇಗೆ ತೊರೆಯಲಿ, ಮರೆಯಲಿ...