Saturday, August 23, 2014

Friday, April 18, 2014

ಬಿಟ್ಟೆನೆಂದರು ಬಿಡಿಸದು ಕರುನಾಡ ಮಣ್ಣಿನ ಬಂಧ....

ಹಸಿವು, ಮಾನಸಿಕ ಹಿಂಸೆ ಯನ್ನ ಕ್ಷಣಾರ್ಧದಲ್ಲಿ ದೂರ ಮಾಡುವ, ಸ್ವರ್ಗಕ್ಕೆ ಕಿಚ್ಚಚ್ಚುವ ಸಾಮರ್ಥ್ಯವಿರುವ ರತ್ಹ್ನದಾಕ್ಷರಗಳ ಸಂಗವ ನಾ ಹೇಗೆ ತೊರೆಯಲಿ, ಮರೆಯಲಿ.. ಜೀವನದಲ್ಲಿ ದೇಹಕ್ಕಂತಿರುವ ಚರ್ಮದ ಹಾಗಿರುವ ಆತ್ಮವಿಶ್ವಾಸವನ್ನ ವೃದ್ಧಿಸುವ ಸೋದರ ಸಂಗಡವನ್ನ ನಾ ಹೇಗೆ ಮರೆಯಲಿ, ತೊರೆಯಲಿ.... ಸಾವಿರಾರು ಕಡುಪಾಪಗಳನ್ನು ಮಾಡಿದರು ಪುಣ್ಯಭೂಮಿಯನ್ನು ಸ್ಪರ್ಶಿಸಿದರೆ ಪುನೀತರಾಗಿ ಮೋಕ್ಷ ಪಡೆಯುವ ಈ ಹಿಂದುಸ್ಥಾನವನ್ನ ನಾ ಹೇಗೆ ತೊರೆಯಲಿ, ಮರೆಯಲಿ.... ಮಾನಸಿಕ ತೊಲನಾಟ್ಗಳನ್ನ ಹೋಗಲಾಡಿಸಿ ನೆಮ್ಮದಿಯಿಂದ ಸ್ವಾವಲಂಬಿಯಾಗಿ ಜೀವಿಸಲು ಸಹಕರಿಸುವ ಗೀತೋಪದೆಶಿಸಿದ ಸರ್ವೋತ್ತಮನನ್ನು ನಾ ಹೇಗೆ ಮರೆಯಲಿ, ತೊರೆಯಲಿ ಕ್ಷಣಿಕ ಮನಸಿನ ಅಸಮತೊಲನಕ್ಕೆ... ಭಾಸ್ಕರನು ಕಂಡು ಕೇಳಿರದ ಮೌಡ್ಯ-ಅಂಧಕಾರವನ್ನ ತಮ್ಮ ಕವಿತೆಗಳ ಮೂಲಕ ಕಿತ್ತೊಗೆದು ಸೊಗಸಾದ ಬದುಕಿನ ಸಾರವನ್ನ ಉಣಿಸಬಡಿಸುವ ಕವಿರತ್ನತ್ರಯರಿರುವ ಕರುನಾಡನ್ನ ನಾ ಹೇಗೆ ತೊರೆಯಲಿ, ಮರೆಯಲಿ...

Friday, January 17, 2014

ಆಸ್ಪದವೇ ಇಲ್ಲ...!

ಕಣ್ಣುಗಳ ಜೊತೆ ರೆಪ್ಪೆಗಳಿರುವಾಗ ಹೊನ್ನೋಟಕ್ಕೆ ಕೊರತೆ ಇದೆಯೇ? ಕಂದನ ಜೊತೆ ಮಾತೆ ಇರುವಾಗ ಮಮತೆಗೆ ಮರೆವಿದೆಯೆ? ಧನಂಜಯನ ಜೊತೆ ತ್ರಿವಿಕ್ರಮನಿರುವಾಗ ಸೋಲಿನ ಸುಳಿವಿದೆಯೇ? ಅಂಧಕಾರದ ಜೊತೆ ಭಾಸ್ಕರನಿರುವಾಗ ಸುಪ್ರಭಾತಕ್ಕೆ ಸುಂಕವಿದೆಯೆ? ತುಟಿಗಳ ಜೊತೆ ನಗುವಿರುವಾಗ ನೋವಿಗೆ ಆಸ್ಪದವೇ? ಪರಿಶ್ರಮದ ಜೊತೆ ಆತ್ಮ ವಿಶ್ವಾಸವಿರುವಾಗ ಯಶಸ್ಸಿಗೆ ಕೊನೆಇದೆಯೆ? ಕನ್ನಡ ಕಣ್ಮಣಿಗಳ ಜ್ಞಾನಪೀಠವೆ ಕರುನಾಡಲ್ಲಿರುವಾಗ ಸಾಹಿತ್ಯಕ್ಕೆ ಸರಿಸಾಟಿ ಇದೆಯೇ? ವರುಣ - ಧರಿತ್ರಿಯರ ಸಂಗಮವಿರುವತನಕ ವನರಾಶಿಗಳ ಹಚ್ಚ ಹಸಿರಿಗೆ ಬರವಿದೆಯೆ? ಎಂದು ಎಂದೆಂದೂ ವಾಸ್ತ್ಸಲ್ಯ ಭರಿತ ಸೂಳ್ನುಡಿಗ ಳ ನ್ನಾಡಿ ಭರವಸೆಯ ಹೊಳೆಯ ರಿಸಿ ಮರೀಚಿಕೆಯಾದ ಯಶಸನ್ನು ಮರುಭೂಮಿಯಲ್ಲಿ ಓಯಸಿಸ್ ಅಂತೆ ಚಿಮ್ಮುಸುವ ಸಾಧನ ಸಹನಾಮೂರ್ತಿ ಇರುವಾಗ ಜೀವನದಲ್ಲಿ ನಿರಾಶ ವಾದಕ್ಕೆ ನೆನಪಾಗುವುದೇ?

ಆಸ್ಪದವೇ ಇಲ್ಲ...!

ಕಣ್ಣುಗಳ ಜೊತೆ ರೆಪ್ಪೆಗಳಿರುವಾಗ ಹೊನ್ನೋಟಕ್ಕೆ ಕೊರತೆ ಇದೆಯೇ? ಕಂದನ ಜೊತೆ ಮಾತೆ ಇರುವಾಗ ಮಮತೆಗೆ ಮರೆವಿದೆಯೆ? ಧನಂಜಯನ ಜೊತೆ ತ್ರಿವಿಕ್ರಮನಿರುವಾಗ ಸೋಲಿನ ಸುಳಿವಿದೆಯೇ? ಅಂಧಕಾರದ ಜೊತೆ ಭಾಸ್ಕರನಿರುವಾಗ ಸುಪ್ರಭಾತಕ್ಕೆ ಸುಂಕವಿದೆಯೆ? ತುಟಿಗಳ ಜೊತೆ ನಗುವಿರುವಾಗ ನೋವಿಗೆ ಆಸ್ಪದವೇ? ಪರಿಶ್ರಮದ ಜೊತೆ ಆತ್ಮ ವಿಶ್ವಾಸವಿರುವಾಗ ಯಶಸ್ಸಿಗೆ ಕೊನೆಇದೆಯೆ? ಕನ್ನಡ ಕಣ್ಮಣಿಗಳ ಜ್ಞಾನಪೀಠವೆ ಕರುನಾಡಲ್ಲಿರುವಾಗ ಸಾಹಿತ್ಯಕ್ಕೆ ಸರಿಸಾಟಿ ಇದೆಯೇ? ವರುಣ - ಧರಿತ್ರಿಯರ ಸಂಗಮವಿರುವತನಕ ವನರಾಶಿಗಳ ಹಚ್ಚ ಹಸಿರಿಗೆ ಬರವಿದೆಯೆ? ಎಂದು ಎಂದೆಂದೂ ವಾಸ್ತ್ಸಲ್ಯ ಭರಿತ ಸೂಳ್ನುಡಿಗಳನ್ನಾಡಿ ಭರವಸೆಯ ಹೊಳೆಯರಿಸಿ ಮರೀಚಿಕೆಯಾದ ಯಶಸನ್ನು ಮರುಭೂಮಿಯಲ್ಲಿ ಓಯಸಿಸ್ ಅಂತೆ ಚಿಮ್ಮುಸುವ ಸಾಧನ ಸಹನಾಮೂರ್ತಿ ಇರುವಾಗ ಜೀವನದಲ್ಲಿ ನಿರಾಶವಾದಕ್ಕೆ ನೆನಪಾಗುವುದೇ?

Tuesday, May 1, 2012

ಆಗಬಹುದು

ಜಗತನ್ನೇ ಬೆಳಗುವ ಭಾಸ್ಕರ ನಾನಗದಿರಬಹುದು ಪ್ರಪಂಚವನ್ನೇ ಜಯಿಸಿ ಆಳಿದ ದೊರೆ ಅಲೆಗ್ಸ್ಯಾಂಡರ್ ನಾನಗದಿರಬಹುದು ಪಂಚಭೂತಗಳನ್ನ ನಿಯಂತ್ರಣದಲ್ಲಿಟ್ಟೂಕೊಂಡಿರುವ ತ್ರಿವಿಕ್ರಮ ನಾನಲ್ಲ ಆಗಬಹುದು ನಾನೊಬ್ಬ ಸ್ಥಿತ ಪ್ರಜ್ಞ ಕಾನನದೊಳಗಿನ ಮುಗಿಲನ್ನು ಮುಟ್ಟುವ ಕುಸುಮದ ಸುಗಂಧ ನಾನಲ್ಲ ಬಾನಿನ ಎಲ್ಲೆಯ ಮೀರಿ ಎತ್ತರಕ್ಕೆ ಹಾರುವ ಗರುಡನ ತೀಕ್ಷ್ಣತೆ ನನಗಿಲ್ಲ ಆಗಬಹುದು ನಾನೊಂದು ಬಾಳಿನ ಸಮುದ್ರವನ್ನ ಸಮರ್ಥವಾಗಿ ಈಜುವ ಮತ್ಸ್ಯ ಆಗಬಹುದು ನಾನೊಂದು ಇರುಳಿನಲ್ಲಿ ಬೆಳಗುವ ಮೇಣದಬತ್ತಿ ಮೋಡದ ಮರೆಯಲಿ ಮಿಂಚಿ ಗುಡುಗುವ ಸಿಡಿಲು ನಾನಲ್ಲ ಕಡಲಿನ ಅಲೆಗಳ, ಧೂಮ್ಮಿಕ್ಕುವ ತೆರೆಗಳ ಅಂಚಿನ ಶಕ್ತಿಯು ನನಗಿಲ್ಲ ಆಗಬಹುದು ನಾ ಸಹಜತೆಯ ಬಯಸುವ ಮಣ್ಣಿನ ಕಣ ನಾಳಿನ ಭವಿಷ್ಯದ ದೀವಿಗೆಯನ್ನ ಕಟ್ಟುವ ಪುಟ್ಟ ಮಣ್ಣಿನ ಕಣ

Wednesday, May 26, 2010

Shubhashayagalu

ಮುಗ್ದ ಮನಸ್ಸಿನ, ನಿಷ್ಕಲ್ಮಶ ಹೃದಯದ ಮುದ್ದು ಕಂದಮ್ಮಗಳಿರಾ ಮನೋಹರ್ಷದಿಂದ ಮಂಗಳಕಾರವಾದ
ಶುಭಾಶಯಗಳನ್ನು ಹೊತ್ತು ತನ್ನಿ ಮಂಗಳ ಸಹೋದರಿಗೆ

ಕೋಮಲವಾದ, ಮೃದುವಾದ, ಸುವ್ವಾಸನೆಭರಿತ ಪುಷ್ಪ - ಗಂಧಗಳಿರಾ ಜೀವನದುದ್ದಕ್ಕೂ ಮೃದುತ್ವ
ಮಾಸದಂತೆ ಸುವ್ವಾಸನೆಯನ್ನು ಬೀರುತ್ತಾ ಶುಭಾಶಯಗಳನ್ನು ಹೇಳಿ ಕೋಮಲ ಸಹೋದರಿಗೆ

ಇಂಪಾಗಿ ಹಾಡುವ ಹಕ್ಕಿ- ಪಕ್ಷಿಗಳಿರಾ ಸುಮಧುರವಾದ ಗಾನವನ್ನು ಬಾಳಿನುದ್ದಕ್ಕೂ ಹಾಡುತ್ತಾ
ಶುಭಾಶಯಗಳನ್ನು ಜಪಿಸಿ ನಲಿಯಿರಿ ಸವಿ ಸಹೋದರಿಗೆ

ದಹಿಸುವ ದಳಪತಿಯನ್ನೇ ತಂಪಾಗಿಸುವ ಮೋಡಗಳೆ ಸದಾ ವರ್ಷವನ್ನು ಚೆಲ್ಲುತ್ತಾ
ಶುಭಾಶಯಗಳನ್ನು ಸುರಿಸಿ ಸೌಮ್ಯ ಸಹೋದರಿಗೆ

ದಣಿದವರ ದಾಹವನ್ನು ನೀಗಿಸುವ ಕಲ್ಪವೃಕ್ಷಗಳಿರಾ ಜ್ಞಾನಾದಾಹ ನೀಗುವಂತೆ ಫಲನೀಡಿ
ಶುಭಾಶಯಗಳನ್ನು ಅರ್ಪಿಸಿ ಕರುಣಾಮಯಿ ಸಹೋದರಿಗೆ

ಜಗತ್ತಿನ ಅಂಧಕಾರವನ್ನು ಅಳಿಸಿ ಬೆಳಕನ್ನೀಯುವ ನೇಸರನೇ ಬಾಳೆಂಬ ಸಾಗರದುದ್ದಕ್ಕೂ
ಸುಪ್ರಭಾತ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಶುಭಾಶಯಗಳನ್ನು ಸಮರ್ಪಿಸು ಹಸನ್ಮುಖಿ ಸಹೋದರಿಗೆ

ಜೀವನವೆಂಬ ಹರಿಗೋಲನ್ನು ನಡೆಸುವ ಹರಿಕಾರನೇ ಆತ್ಮವಿಶ್ವಾಸ,ಯಶಸ್ಸೆಂಬ ಹಣತೆಗಳು
ಯಾವ ತೊಡಕುಗಳಿಗೆ ಸಿಲುಕದಂತೆ, ಸದಾ ಪ್ರಜ್ವಲಿಸುವಂತೆ ಆಶೀರ್ವದಿಸಿ ಶುಭಾಶಯಗಳ
ಸರಮಾಲೆಯನ್ನು ತೊಡಿಸು ಸೂಕ್ಷ್ಮಮತಿ ಸಹೋದರಿಗೆ

Sunday, April 18, 2010

ನಲುಗದ ನಲ್ಮೆಯ ಮನವೇ

ಸ್ವಾವಲಂಬಿಯಾಗು ಮನವೇ
ಪರರನ್ನು, ನನ್ನವರನ್ನು ನೋಯಿಸಿ ನಂದಿಸದಿರಲಿಕ್ಕೆ
ಸುಂದರವಾದ ಜೀವನ ರೂಪಿಸಿಕೊಲ್ಲಲಿಕ್ಕೆ ಸಾಧಿಸಲಿಕ್ಕೆ...


ಕರುಣಾಮಯಿಯಾಗು ಮನವೇ
ಕಷ್ಟ - ಕಾರ್ಪಣ್ಯಗಳಲ್ಲಿ ಬೆಂದು ಬೇಸತ್ತಿರುವ ಆಶೊತ್ತರಗಳಿಗೆ ಸಾಂತ್ವನದ ಲೇಪನ ಹಕ್ಚಿ ಬದುಕನ್ನು ಹಸನಗೊಲಿಸಲಿಕ್ಕೆ
ಜೀವನದುಡ್ದಕ್ಕೂ ಭರವಸೆ, ಆಶಾಭಾವನೆಗಳ ಹೊಳೆ ಹರಿಸಲಿಕ್ಕೆ...

ಸೌಮ್ಯಮಯಿಯಾಗು ಮನವೇ
ತಾಳ್ಮೆಯ ಒಡಲ್ಲನ್ನರಿತು ಜೀವನದ ಸಾರವನ್ನ ಸವಿಯಲಿಕ್ಕೆ
ಪರಮ ಶ್ರೇಷ್ಟವಾದ ಮನುಧರ್ಮದ ಮಹತ್ವವನ್ನ ಸಾರಿ ಹೇಳಲಿಕ್ಕೆ....

ನಿರಾತಂಕಮಯಿಯಾಗು ಮನವೇ
ಗೆಲುವಿನ ಸೋಪಾನವನ್ನ ಸುಭದ್ರಗೊಳಿಸಲಿಕ್ಕೆ
ನಾನೆಂಬ ಅಹಂಕಾರ ಹಾಗೂ ಮೌಢ್ಯತೆಯಿಂದ ಹೊರ ಬರಲಿಕ್ಕೆ....

ಪಾವನಮಯಿಯಾಗು ಮನವೇ
ಪೋಷಕರ ಪೋಷಣೆಯನ್ನ ಪುಷ್ಪಗಳ ಕೋಮಲತೆ,ಮೃದುತ್ವದಂತೆ ಪೋಷಿಷಲಿಕ್ಕೆ
ನಾಡು-ನುಡಿ-ಸಂಸ್ಕೃತಿಯನ್ನ ಜನನಿಯಂತೆ ಗೌರವಿಸಲಿಕ್ಕೆ, ಪೂಜಿಸಲಿಕ್ಕೆ....