Wednesday, May 26, 2010

Shubhashayagalu

ಮುಗ್ದ ಮನಸ್ಸಿನ, ನಿಷ್ಕಲ್ಮಶ ಹೃದಯದ ಮುದ್ದು ಕಂದಮ್ಮಗಳಿರಾ ಮನೋಹರ್ಷದಿಂದ ಮಂಗಳಕಾರವಾದ
ಶುಭಾಶಯಗಳನ್ನು ಹೊತ್ತು ತನ್ನಿ ಮಂಗಳ ಸಹೋದರಿಗೆ

ಕೋಮಲವಾದ, ಮೃದುವಾದ, ಸುವ್ವಾಸನೆಭರಿತ ಪುಷ್ಪ - ಗಂಧಗಳಿರಾ ಜೀವನದುದ್ದಕ್ಕೂ ಮೃದುತ್ವ
ಮಾಸದಂತೆ ಸುವ್ವಾಸನೆಯನ್ನು ಬೀರುತ್ತಾ ಶುಭಾಶಯಗಳನ್ನು ಹೇಳಿ ಕೋಮಲ ಸಹೋದರಿಗೆ

ಇಂಪಾಗಿ ಹಾಡುವ ಹಕ್ಕಿ- ಪಕ್ಷಿಗಳಿರಾ ಸುಮಧುರವಾದ ಗಾನವನ್ನು ಬಾಳಿನುದ್ದಕ್ಕೂ ಹಾಡುತ್ತಾ
ಶುಭಾಶಯಗಳನ್ನು ಜಪಿಸಿ ನಲಿಯಿರಿ ಸವಿ ಸಹೋದರಿಗೆ

ದಹಿಸುವ ದಳಪತಿಯನ್ನೇ ತಂಪಾಗಿಸುವ ಮೋಡಗಳೆ ಸದಾ ವರ್ಷವನ್ನು ಚೆಲ್ಲುತ್ತಾ
ಶುಭಾಶಯಗಳನ್ನು ಸುರಿಸಿ ಸೌಮ್ಯ ಸಹೋದರಿಗೆ

ದಣಿದವರ ದಾಹವನ್ನು ನೀಗಿಸುವ ಕಲ್ಪವೃಕ್ಷಗಳಿರಾ ಜ್ಞಾನಾದಾಹ ನೀಗುವಂತೆ ಫಲನೀಡಿ
ಶುಭಾಶಯಗಳನ್ನು ಅರ್ಪಿಸಿ ಕರುಣಾಮಯಿ ಸಹೋದರಿಗೆ

ಜಗತ್ತಿನ ಅಂಧಕಾರವನ್ನು ಅಳಿಸಿ ಬೆಳಕನ್ನೀಯುವ ನೇಸರನೇ ಬಾಳೆಂಬ ಸಾಗರದುದ್ದಕ್ಕೂ
ಸುಪ್ರಭಾತ ಕಿರಣಗಳನ್ನು ಪ್ರತಿಬಿಂಬಿಸುತ್ತಾ ಶುಭಾಶಯಗಳನ್ನು ಸಮರ್ಪಿಸು ಹಸನ್ಮುಖಿ ಸಹೋದರಿಗೆ

ಜೀವನವೆಂಬ ಹರಿಗೋಲನ್ನು ನಡೆಸುವ ಹರಿಕಾರನೇ ಆತ್ಮವಿಶ್ವಾಸ,ಯಶಸ್ಸೆಂಬ ಹಣತೆಗಳು
ಯಾವ ತೊಡಕುಗಳಿಗೆ ಸಿಲುಕದಂತೆ, ಸದಾ ಪ್ರಜ್ವಲಿಸುವಂತೆ ಆಶೀರ್ವದಿಸಿ ಶುಭಾಶಯಗಳ
ಸರಮಾಲೆಯನ್ನು ತೊಡಿಸು ಸೂಕ್ಷ್ಮಮತಿ ಸಹೋದರಿಗೆ

No comments: