Thursday, February 11, 2010

ಆರಿದ್ದರೇನು ಫಲ?

ಸೂರ್ಯ-ಚಂದ್ರರಿದ್ದಾರೇನು ಫಲ
ನರರನ್ನು ಮೂಢಾಂಧಕಾರದಿಂದ ಹೊರತೆಗೆಯದಿದ್ದೊದೆ?
ಕೋಮಲತೆಯ ಸಹಸ್ರಾರು ಹೂವುಗಳಿದ್ದಾರೇನು ಫಲ
ಸುವ್ವಾಸನೆಯನ್ನು ಬೀರದಿದ್ದೊದೆ?
ಸಹಸ್ರಾರು ಮರಗಳನೊಳಗೊಂಡ ದಟ್ಟ ಅರಣ್ಯಗಳಿದ್ದಾರೇನು ಫಲ
ತಂಗಾಲಿಯ ಸವಿಯನ್ನು ಉಣಿಸಲೊಲ್ಲಡೊಡೆ?

ಭೋರ್ಗರೆಯುವ ಪವಿತ್ರ ನದಿಗಳಿದ್ದಾರೇನು ಫಲ
ದಾಹ ನೀಗಲು ಅಶಕ್ತಾರಾದೊಡೆ?
ಯಜ್ಞ_ಯಾಗಾದಿಗಳು, ಹೋಮ-ಕುಂಡಗಳಿದ್ದಾರೇನು ಫಲ
ಅರಿಷದ್ವರ್ಗವಿಜಯ ಪುರೋಹಿತರಿಲ್ಲಡೊಡೆ?
ಆಚಾರ-ವಿಚಾರ,ನೀತಿ-ಸಂಹಿತೆಗಳಿದ್ದಾರೇನು ಫಲ
ಪಾಲಿಸುವವರಿಲ್ಲಡೊಡೆ,ಸಜ್ಜನ ಶಿಖಾಮನಿಗಲಿಲ್ಲಡೊಡೆ?

ರಕ್ತಸಂಬಂಧಿಗಳಿದ್ದಾರೇನು ಫಲ
ಪ್ರೀತಿ-ವಾತ್ಸಲ್ಯಗಳಿಲ್ಲಡೊಡೇ?
ಸನಾತನ ಮಹಾಕಾವ್ಯಗಳು,ಹರಿಶ್ಚಂದ್ರ ಕಾವ್ಯಗಳನ್ನೋದಿದರೇನೂ ಫಲ
ಸತ್ಯ-ಧರ್ಮಕ್ಕೆ ದಾಸರಿಲ್ಲಡೊಡೆ?
ಬ್ರಹ್ಮ-ವಿಷ್ಣು-ಮಹೇಶ್ವರರಿದ್ದಾರೇನು ಫಲ
ಎನ್ನ ಸಹಾನಮೂರ್ತಿಯಂ ಕಾದು ಸನ್ಮಾರ್ಗದಲ್ಲಿ ಸಲಹದಿದ್ದೊದೆ?

Srusthikartha

ದೇ - ದೇಹವಿಲ್ಲದೇ, ಜೀವರಾಶಿಗಳ ದೇಹದ ನಾಡಿ ಮಿಡಿತಗಳನ್ನು ಮಿಡಿಯುವ ಸೂತ್ರಧಾರ
ವ - ವರ್ಣಿಸಲಸಾಧ್ಯ, ವರ್ಣಗಳಿಲ್ಲದ ವರಾಹನ
ರು - ರುಚಿ - ಅಭಿರುಚಿಗಳಿಲ್ಲದ, ರೂಪ - ಲಾವಣ್ಯಗಳಿಲ್ಲದ ರಿಪು
("ರಿಪು" ಕೃಷ್ಣನ ಇನ್ನೊಂದು ಹೆಸರು ದನುಜರಿಪು)







ಆದಿ - ಅಂತ್ಯಗಳಿಲ್ಲದ ಉತ್ತಮೋತ್ತಮನು
ಹುಟ್ಟು - ಸಾವುಗಳ ಜಂಜಾಟವಿಲ್ಲದ ಯಮನೊಡೇಯನು
ಪಂಚಭೂತಗಳನ್ನು ಪಂಚೇಂದ್ರಿಯಗಳಂತೆ ಶೃಂಗಾರಿಸಲ್ಪಟ್ಟ ತ್ರಿಲೋಕ ಒಡೆಯನು

ಸಕಲ ಜೀವರಾಶಿಗಳ ಹೃದಯಕಮಲದಲ್ಲಿ, ನಿರ್ಜೀವರಾಶಿಗಳ ಅಂತರಾತ್ಮದಲ್ಲಿ ನೆಲೆಸಿರುವ ಸರ್ವಂತರ್ಯಾಮಿಯು
ಸಕಲ ಜೀವರಾಶಿಗಳ ಚಲನವಲನಗಳ ಕರ್ತೃ ಹಾಗೂ ಕರ್ಮನು
ತನ್ನಿಚ್ಛೆ, ತನ್ನನಿಸಿಕೆಗಳ ಗುರಿ ಇಟ್ಟುಕೊಂಡು ಜೀವರಾಶಿಗಳನ್ನಾಡಿಸುವ ಸೂತ್ರಧಾರನು

ಪುರಾಣ, ವೇದೋಪನಿಷತ್ಹುಗಳ ಮೂಲರೂಪವೇ ಈ ಅಜರಾಮರ ಪಂಡಿತನು
ಧರ್ಮ- ಸಹಿಷ್ಣುತೆ, ನೀತಿ-ಸಂಸ್ಕಾರ, ಸೂಳ್ನುಡಿ-ಸೌಜನ್ಯತೆಗಳ ಸಾಕಾರಮೂರ್ತಿ ಗೋವಿಂದನು
ನರರ ಉಪಟಳ ಮಿತಿ ಮೀರಿದಾಗ ಅಧಿಕಾರವನ್ನು 'ಕಾಲ' ನಿಗೆ ಹಸ್ತಾಂತರಿಸುವ ಚಾಣುಕ್ಯನು

ಮನೋಲ್ಲಾಸಕರವಾದ ನಿಸರ್ಗದ ಸೌಂದರ್ಯ, ಹಕ್ಕಿ-ಪಕ್ಷಿಗಳ ಇಂಪಾದ ರಾಗ, ಝ್ಳುಝ್ಳು ಹರಿಯುವ ನದಿಗಳ ಚೆಲುವು ಇವುಗಳ ಮನೋಹಕ ಸೃಷ್ಟಿಕರ್ತ ಆ ಮನೋಹರನು
ಆಧರ್ಮ, ಅನೀತಿ, ದೌರ್ಜನ್ಯ ಹಾಗೂ ಸ್ತ್ರೀ ಅಪಮಾನಗಳ ಸಹಿಸದ ಉಗ್ರ ನರಸಿಂಹನು
ಬಡವನ ಮನೋವೇದನೆಯನ್ನರಿತು ಅವನ ಆಮಂತ್ರಣಕ್ಕೆ ಓಗೊಟ್ಟೂ ಬಡತನದ ಬೇಗೆಯನ್ನು ಹಾಲಿನ ಸಮುದ್ರವನ್ನು ಸೃಷ್ಠಿಸುವುದರ ಮೊಲಕ ನೀಗಿಸಿದ ಗೋಪಾಲನು